ಕಡಲಂಚಲಿ ಕುಳಿತುರು ಹೀಗೆ
ಕಡೆವರೆಗೂ ನೋಡುತ ಹಾಗೆ
ಒಡಲಾಳದ ಪ್ರೀತಿ ಉಕ್ಕಿ ಬರದೇ
ಓಡುವ ನಕ್ಷತ್ರಗಳ ಹಿಂಡು
ಹಾಡುವ ಹಕ್ಕಿಗಳು ಬಂದು
ಕಾಡುವ ಪ್ರೀತಿ ಮಳೆಯು ಬರದೇ
ಆಸರೆ ಹೆಗಲನ್ನು ಕೊಟ್ಟು
ಆಸೆಗಳ ಕನಸಗಳನ್ನ ಬಿತ್ತು ಸ-
ರಸಮಯ ಪ್ರೀತಿ ಇರಿಳು ಬರದೇ
ಹಸಿರಿನ ಕೈ ಬಳೆ ತೊಟ್ಟು
ಹಸಿ ಕುಂಕುಮ ತಿಲಕವ ಇಟ್ಟು
ಬಿಸಿ ಹಾಲಿನ ಪ್ರೀತಿ ರಾತ್ರಿ ಬರದೇ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ