ನೋಡು ಮಗು ಇಲ್ಲಿ ನೋಡು
ತಿಳಿ ಹೇಳುತಿದೆ ಸುತ್ತ ಪ್ರಕೃತಿ
ಏರುವ ಅಲೆಗಳ ಜೊತೆಯಲಿ
ಉರಿದು ಬೊಬ್ಬಿರಿದರೂ ಇರುಳಲಿ
ಪ್ರಶಾಂತವಾಗಿದೆ ಕಡಲ ಒಡಲು
ಗಾಳಿಯ ಸೇಳತಕ್ಕೆ ಹೆದರುತಲಿ
ದೋಣಿ ನಡೆಸಿದರೂ ಇರುಳಲಿ
ಮೌನವಾಗಿದೆ ಚಲಿಸದಂತೆ ನಿಂತು
ಗುಡುಗು ಸಿಡಿಲು ಭೊರ್ಗರೆಯುತಲಿ
ಮಳೆ ಅರ್ಭಟಿಸಿದರೂ ಇರುಳಲಿ
ನಿರ್ಮಲವಾಗಿದೆ ತಿಳಿನೀಲಿ ಬಾನು
ಮನಸು ಕಡಲು ಕಡೆದಂತೆ
ಕನಸುಗಳು ತೇಲುವ ದೂಣಿಯಂತೆ
ಕಷ್ಟಗಳು ಮಳೆ ಮೋಡದಂತೆ
ಎಲ್ಲವೂ ಬಂದು ಹೋಗುವವು ತಾಳ್ಮೆಇರಲಿ
ಎಲ್ಲಕ್ಕೂ ಕೊನೆಯುಂಟು! ಶಾಂತಿಇರಲಿ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ