ಯಾರದೇನು ಭಯವಿಲ್ಲ
ನಿನ್ನ ಪ್ರೀತಿಸುವುದಕ್ಕೆ
ಯಾರ ಅಪ್ಪಣೆಯೂ ಬೇಕಿಲ್ಲ
ನಿನ್ನ ಹೊಗಳುವುದಕ್ಕೆ
ಬಾಯಾರಲೇಬೆಕಿಲ್ಲ ನಿನ್ನನು
ನನ್ನೊಳು ಇಳಿಸುವುದಕ್ಕೆ
ನೀ ಇಲ್ಲದೆ ನಾನಿಲ್ಲ ಎಂದು
ಎಂದೂ ಭಾವಿಸಿಯೇ ಇಲ್ಲ
ನೀ ಸಿಗುವೆ ಚಿತ್ರ ವಿಚಿತ್ರದೊಳು
ಭುವಿ ಆಗಸ ಸುರಾ ಲೋಕದೊಳು
ಭಾವನೆಗೆ ತುಸು ಬೆರಗಾಗಿ ನಿಂತು
ಕಾಮನೆಗೆ ಮೂರ್ತತೆ ಕೊಡುವುದಕ್ಕೆ
ನೀನೋಬ್ಬಳು ಇದ್ದು ಬಿಡು ಸಾಕು
ಕಂಡ ಕನಸು ನನಸಾಗುವುದಕ್ಕೆ
ಅರಿದು ಕುಡಿದು ಮತ್ತೇರಿಸಿಕೊಂಡು
ಪದಗಳ ಜೊತೆ ತೇಲಾಡುವುದಕ್ಕೆ
ಬರೆದು ಕುಣಿದು ಎದೆ ಏರಿಸಿಕೊಂಡು
ಹಗಲಿರುಳು ತಬ್ಬಿ ಮುತ್ತಿಡುವುದಕ್ಕೆ
ನೀನಿರುವೆ ಕವಿಯ ಹೃದಯದೊಳು
ಆಗಾಗ ಜಾರುವೆ ಈ ಕೈಬೆರಳೊಳು
'ಕನ್ನಡ' ಪದಗಳ ಜೊತ ಆಟವಾಡಿ
ಆರ್ತನಾಗಿ ನಿನ್ನ ಆರಾಧಿಸುವುದಕ್ಕೆ
ನನ್ನ ನೀ ಹುಚ್ಚನೆಂದರು ಪರವಾಗಿಲ್ಲ
ಎಲ್ಲರ ಜೊತೆ ದಿನವೂ ಹಂಚಿಕೊಳ್ಳುವುದಕ್ಕೆ
-- ಪ್ರಭಂಜನ : (ಇಂದು ರಚಿಸಿದ 'ವಿಶ್ವ ಕವಿ ದಿನದ' ವಿಶೇಷ )