ಹಸಿರ ಕಣ್ಣಲ್ಲೇನೋ ಹೊಸ ಸೆಳೆತವಿದೆ
ಉಸಿರು ಉಸಿರಿನಲ್ಲಿ ಹೊಸ ಹುಮ್ಮಸಿದೆ
ಉಸಿರು ಉಸಿರಿನಲ್ಲಿ ಹೊಸ ಹುಮ್ಮಸಿದೆ
ಹೊಳಪು ತುಂಬಿದ ಮುಖ ಪೂರ್ಣ ಚಂದ್ರನಂತಿದೆ
ಎಳೆಯ ಮುಂಗುರುಳು ಸೋಕಿ ಅಲೆಗಳು ಎದ್ದಿವೆ
ಹಳೆಯ ಕನಸು ಹೊತ್ತು ಕಪ್ಪು ಮೋಡ ಬಂದಿತೇ
ಹೊಸ ಪ್ರೀತಿಗೆ ನವಿರಾದ ತಂಪು ಗಾಳಿ ಬೀಸಿದೆ
ಮಧುರ ಮಾತು ಆಡಿದಂತೆ ಹನಿಯು ಉದುರಿತೆ
ಮನಸು ಮಳೆಯಲ್ಲಿ ಮಿಂದು ಇಬ್ಬನಿ ಹಗುರವಾಗಿದೆ
ನಲಿವ ನಿನ್ನ ಕಂಡು ಭುವಿಯು ತೊಯ್ದು ಹೋಯಿತೆ
ಹೆಜ್ಜೆ ಗುರುತು ಹಿಂಬಾಲಿಸಿ ಬೀಜ ಮೊಳಕೆ ಒಡೆಯಿತೆ
ಮೊದಲ ವಸುಗೆಗೆ ಮೈ ಅರಳಿದಂತೆ ಕುಸುಮ ಅರಳಿತೆ
ಮಕರಂದ ಹೀರಲು ಬಂದ ಚಿಟ್ಟೆ ದುಂಬಿ ಬಣ್ಣ ತುಂಬಿವೆ
ಬಸಿರು ತುಂಬಿ ಭುವಿಯ ತುಂಬಾ ಕಾಯಿ ಪೀಚು ಸುರಿದಿವೆ
ರಸಮಯ ಹಣ್ಣು ತುಟಿಗೆ ಹೊಸ ರುಚಿಯ ಹರುಷ ತಂದಿದೆ
ಪ್ರೀತಿ ಉಕ್ಕಿ ಕೆರೆ, ತೊರೆ, ನದಿಯು ಮೈ ತುಂಬಿ ಹರಿದಿವೆ
ಮೋಹ ತುಂಬಿದ ಮಿಲನದಂತೆ ನದಿಗಳು ಸಾಗರ ಸೇರಿವೆ
ಸಾಗರದ ಅಂಚಿನಲ್ಲಿ ಹೊಳೆವ ಪುಟ್ಟ ಚಂದ್ರ ಉದಯಿಸುತಿದೆ
ಮಧು ಚಂದ್ರದಇರುಳಿನಲಿ ಮತ್ತೆ ಅಲೆಗಳು ಮೇಲೇಳುತಿವೆ