ಉಲ್ಲಾಸ ಗೊಂಡಿತ್ತು ಮನಸು ನಿನ್ನೊಲುಮೆಯಿಂದ
ಘಾಸಿ ಗೊಳಿಸಿದೆ ನೀನು ಅತಿ ಸಲುಗೆಯಿಂದ
ನಿನ್ನೊಲವ ಬಯಸಿ ಮಾತಾಡಿದೆ ಮಧುರ ಕನಸಿನಿಂದ
ಕನಸು ಮುರಿದು ಹೃದಯ ಚೂರಾಯಿತು ನಿನ್ನಿಂದ
ಮನಸು ಕೊರಗುತಿದೆ ಹಿತವಾದ ನಿನ್ನ ನೆನಪಿಂದ
ಪಥ್ಯವಾಗದ ಸತ್ಯ ನೀ ತಿಳಿ ಒಳಗಣ್ಣಿನಿಂದ
ಅರಿತು ಬರುವೆ ನನ್ನಲಿ ನೀನು ಮಾಡಿದ ತಪ್ಪಿನಿಂದ
ಬರುವುದೆಲ್ಲ ಬರಲಿ ಕಾಯುವೆ ನಿನಗಾಗಿ ಪ್ರೀತಿಯಿಂದ