ಮಂಗಳವಾರ, ಡಿಸೆಂಬರ್ 31, 2013

ಓಡೋಡಿ

ನಲ್ಲೆಯೇ ನಿನ್ನ ನೋಡಿ 
ಬರುವೆನು ಹಿಂದೆ ಓಡಿ
ನಿನ್ನ ಆ ರೂಪ ಕಾಡಿ 
ಕಣ್ಣ ಸೆಳೆಯಲು ಬಂದೆ ಓಡೋಡಿ 

ಸೊಗಸಾದ ಹಾಡನು ಹಾಡಿ
ಮೊಗತೋರಿದೆ ಮೋಡಿಯ ಮಾಡಿ 
ನಡೆವಾಗ ಬಳುಕುವುದನು ನೋಡಿ 
ಹಿಡಿಯಲು ಬಂದೆ ನಾ ಓಡೋಡಿ 
 
ನಗುವಾಗ ಕೆನ್ನೆ ಗುಳಿ ಮೂಡಿ 
ತೂಗುವ ಆ ಕೇಶ ಜೋತಾಡಿ 
ಬಿನ್ನಾಣದಿ ನಿಂತ ನಿನ್ನ ನೋಡಿ  
ಕೆನ್ನೆ ಸವರಲು ಬಂದೆ ಓಡೋಡಿ 

ಒಂದು ಬಾರಿ ಕೈ ಹಿಡಿದು ಕೂಡಿ 
ಬಂದು ಬಿಡು ನನ್ನ ಜೋಡಿ 
ಚಂದದಿ ನಗುತ ಪ್ರೀತಿ ಮಾಡಿ 
ಅಂದದಿ ಬಾಳುವ  ಜೋತೆಕೂಡಿ 

ಶುಕ್ರವಾರ, ಡಿಸೆಂಬರ್ 13, 2013

ಎಲ್ಲಿ ಹೋದೆ

ಎಲ್ಲಿ ಹೋದೆ ನನ್ನ ನಲ್ಲೆ 
ಬಂದು  ನಗುವ ಚಲ್ಲದೆ    \\ ಪ \\

ಬೆಲ್ಲ ದಂತ ಮಾತುಕೇಳಿ
ವರುಷವಾಯ್ತು ಮೆಲ್ಲಗೆ  \\ ಅ ಪ \\ 

ಹೃದಯ ಮೀಟಿ  ನುಡಿಸಿ ಹಾಡಿ 
ಬೆಳಗೋ ಕಂಗಳಿಂದ  ನೋಡಿ 
ಪ್ರೀತಿರಾಗ  ಬರಿದು  ಮಾಡಿ   \\೧ \\ ಎಲ್ಲಿ 

ಆಸೆಯಿಂದ  ಕನಸು ತುಂಬಿ 
ಭಾಷೆಯಿಂದ ಸೊಗಸು  ತುಂಬಿ 
ಹುಸಿ ವಿಷಯ ಹೃದಯ ತುಂಬಿ  \\೨\\ಎಲ್ಲಿ 

ಮಲ್ಲಿಗೆ ಹೂವ್ವಿನಂತೆ ನೀನು 
ಮೆಲ್ಲ ಮೆಲ್ಲಗೆ ತಿಳಿದೇ ನಾನು 
ಕಲ್ಲು ಮನಸು ಮಾಡಿ ನೀನು \\೩\\ಎಲ್ಲಿ 

ಇದ್ದು ಜೊತೆಗೆ ದಿನವು ಕಾಡಿ  
ತಿದ್ದಿ ತಪ್ಪನು ಪ್ರೀತಿ ಮಾಡಿ 
ಕದ್ದು ನನ್ನ ಹೃದಯ ಸೇರದೆ \\4\\ ಎಲ್ಲಿ