ಸೋಮವಾರ, ಏಪ್ರಿಲ್ 29, 2013

ಸ್ವಂತಿಕೆ

ಮೋಡದ  ಹಿಂದೆ ಇಣಿಕಿ ನೋಡದಿರು 
ತೋರು ಮೊಗವನ್ನ ಮಳೆಗಾಲದಲ್ಲೂ 
ಎಲ್ಲಿ ಓದಿ ಹೋಗುವೆ ಅಮಾವಾಸ್ಯೆ ಯಂದು 
ತಪ್ಪದೆ ಬಾ ಹತ್ತಿರ ಹುಣ್ಣಿಮೆ ದಿನದಂದು 

ಹಗಲು ರಾತ್ರಿ ಎನ್ನದೆ ನೀ ಹುಟ್ಟುವೆಯಲ್ಲ 
ಯಾಕೆ ನಿರ್ದಿಷ್ಟ ಸಮಯ ಪಾಲಿಸುವುದಿಲ್ಲ 
ಬೆಳೆಯುವ, ಕ್ಷೀನುಸುವುದು ನಿನ್ನ ಗುಣವೆಂದು 
ಜನ ಗೊಣಗುವ ಮುನ್ನ ಮುಖ ತೋರು ಬಂದು 

ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವೆಯಲ್ಲ 
ನಿನ್ನ ಸ್ವಂತಿಕೆಯ ಪರಿಚಯ ಯಾರಿಗೂ ತಿಳಿದಿಲ್ಲ 
ತಿಳಿಸು ನೀ ಇಲ್ಲದೆ  ಸಮುದ್ರ ಉಕ್ಕೆರುವುದಿಲ್ಲ 
ಭೂಮಿ ತನ್ನ ಪಥದಲ್ಲಿ ಚಲಿಸುವುದಿಲ್ಲವೆಂದು !
ಪ್ರೀಮಿಗಳು ಮಧುಚಂದ್ರಕ್ಕೆ ಹೋಗಲಾರಾರೆಂದು!

ಮಂಗಳವಾರ, ಏಪ್ರಿಲ್ 16, 2013

ಋತು


ಋತು ಬದಲಾವಣೆಯಿಂದ 
ಹೊಸ ಗಾಳಿಯು ಬೀಸುತಿದೆ

ವಿಜಯ ತುಂಬಿದ ಸಂವತ್ಸರದ 
ನವ ವಸಂತವು ಬರುತಲಿದೆ

ಕರಿ ಕೋಗಿಲೆ ಚಿಗುರನು ತಿನ್ನುತಲಿ 
ಸ್ವರ ಹಿಡಿದು ಹಾಡುತಿದೆ
ಹೂಗಳ ಗೊಂಚಲ ತುದಿಯಲ್ಲಿ   
ಭೃಂಗಗಳು  ಸುಸ್ವರ ಸೂಸುತಿವೆ 

ಬಣ್ಣ ಬಣ್ಣದ ಹೂಗಳ ಚಂದವನು  
ಬರಿ ಪದಗಳಲಿ ಬಣ್ಣಿಸಬಹುದೆ  
ಪ್ರಕೃತಿಯ ಹಸಿರು ಉಡುಗೆಯನು  
ಹೊಸ ಹಾಡಲಿ ಹರಿಬಿಡಬಹುದೆ

ನೂತನ ಸೃಷ್ಟಿಯ ಆಗಮನ 
ಧರಣಿಗೆ ಹೊಳಪನು ನೀಡುತಿದೆ 
ವಿನೂತನ ಭಾವದ  ಆಸೆಗಳು 
ಮೂಡುತ ಮೈ ಮನ ಕುಣಿಸುತಿದೆ

ಮಂಗಳವಾರ, ಏಪ್ರಿಲ್ 2, 2013

ಜೋ... ಜೋ


ಮಲಗು  ಮಲಗೆನ್ನ ಮುದ್ದಿನ ಗಿಣಿಯೆ 
ಅಗೆದರು ಬರಿದಾಗದ ಪ್ರೇಮದ  ಗಣಿಯೆ 
ತುಂಬಿ ತುಳುಕುತಿದೆ ಪ್ರೀತಿಯ ಹೊಳೆಯೇ 
ಮಲಗುಸಿವೆ ಎದೆಮೇಲೆ ಸುರಿಸುತ್ತ  ಮುತ್ತಿನ ಮಳೆಯೇ     ಜೋ... ಜೋ 
ಹಗಲೆಲ್ಲ ಸುತ್ತಾಡಿ ಕಾಲು ನೋವುತಿದೆಯೇ 
ಮೃದುವಾದ ಪಾದಕ್ಕೆ ಬೆಣ್ಣೆ ಹಚ್ಚಿ  ವತ್ತುವೆ   
ಇರುಳಲ್ಲಿ ತಾರೆಗಳಂತೆ ಮಿನುಗುತಿಹೇ ಚಲುವೆ   
ಮಲಗಿಸುವೆ ಬಿಗಿದಪ್ಪಿ ಸುರಿಸುತ್ತ ಒಲವಿನ ಸುಧೆಯೇ  ..  ಜೋ... ಜೋ  

ಮೆತ್ತನೆ ಹಾಸಿಗೆಗೆ  ಮಲ್ಲೆ ಗುಲಾಬಿ ಜೋಡಿಸಿರುವೆ  
ಹಿತವಾದ ರಾತ್ರಿಯಲಿ  ಚಂದಿರನ ಕರೆತರುವೆ  
ಮಲಗದೇ ಹೇಗೆ ನನ್ನ ಆಟ  ಆಡಿಸುವುದು ಸರಿಯೇ 
ಮಲಗುವ ಬಾ  ಮನದಿನ್ನೇ ಸವಿಯುತ್ತ  ಜೇನಿನ ಹನಿಯನ್ನೇ    ಜೋ... ಜೋ