ಶುಕ್ರವಾರ, ಸೆಪ್ಟೆಂಬರ್ 14, 2012

ನನ್ನವಳು

ಮೃದುವಾದ ಮೊಗದವಳು
ಮೊಗ್ಗಿನಂತೆ ಅರಳದವಳು
ಅರಳುವಳು ನನ್ನ ಮನಸಿನಲ್ಲಿ

ಬಿಸಿಲಿಗೂ ಹೆದರದವಳು
ಚಳಿಗೂ ಬೆದರದವಳು
ಬೆದರಿಸುವಳು ಪುಟ್ಟ ನೋಟದಲ್ಲಿ

ಹೂವಿನ ತೂಕದವಳು
ಗಾಳಿಗೆ ಹಾರದವಳು
ಹಾರುವಳು ನನ್ನ ಹೃದಯದಲ್ಲಿ

ಹೊಗಳಿಕೆಗೆ ಉಬ್ಬದವಳು
ತೆಗಳಿಕೆಗೆ ಕುಗ್ಗದವಳು
ಕುಗ್ಗುವಳು ನಾನಿಲ್ಲದೆ ಎದುರಿನಲ್ಲಿ

ಅಲ್ಲಿಯೂ ನಗದವಳು
ಎಲ್ಲಿಗೂ ಬರದವಳು
ಬರುವಳು ನಗುತ ಪ್ರೀತಿ ಚಲ್ಲಿ

ಯಲ್ಲಿಯೂ ಇರದವಳು
ಯಾರಿಗೂ ಸಿಗದವಳು
ಸಿಗುವಳು ನನಗೆ ಮಾತ್ರ ಕನಸಿನಲ್ಲಿ

ಶುಕ್ರವಾರ, ಸೆಪ್ಟೆಂಬರ್ 7, 2012

ಗೆಳೆತನ!

ಎಲ್ಲರಿಗೂ ಒಂದು ದಿನ ಬರುವುದು ಸುದಿನ
ಇವರು ಇಲ್ಲದಿದ್ದರೆ ಬಾರದೇ ಹೋಗಬಹುದು ಆದಿನ
 
ವಯಸಿನ ಹಂಗಿಲ್ಲ ಭಾವನೆಗೆ ಮಿತಿಯಿಲ್ಲ
ಹೇಳಬಹುದು ನಾ ಹೇಳಲು ಆಗದಿದ್ದನ್ನ
ಕನಸುಗಳ ಹೊತ್ತು ಹಗಲಿರಿಳು ಜೊತೆಗೂಡಿ
ಸಮಯ ಕಳೆಯುತಿದ್ದೆವು ಅದು ಎಷ್ಟು ಚನ್ನ
 
ಕಾಣದೆ ಇರುವ ಇದ್ರಿಯಕ್ಕೂ ನಿಲುಕದ
ಸ್ನೇಹಕ್ಕೆ ಎಲ್ಲಿಂದ ಹಾಕಲಿ ಪರಧಿಯನ್ನ
ಸನಿಹ ಬಂದು ಧನ್ಯವಾದ ಹೇಳಲು ಪದಗಳಿಲ್ಲ
ಇರಲಿ ವಿಶ್ವಾಸದ ಗೆಳೆತನ ಜೀವದಲ್ಲಿ ಅನುದಿನ
   
ಅರಿತು ಅರಿಯದೆ ಮಾಡಿದ ತಪ್ಪನ್ನು
ಕ್ಷಮಿಸುವ ದಿನವೆಂದು ಬಂದಿದೆ ಗೆಳೆಯರದಿನ ...
ಮನವು ಮರೆವೆನೆಂದರು ಬಿಡದು
ಹೃದಯದ ತುಂಬಾ ತುಂಬಿದೆ ಈ ಗೆಳೆತನ!..