ಮನದ ಮಂಟಪ ಸೇರಿ
ಆ ಚಂದದ ಮೊಗವ ತೋರಿ
ಮೋಹದ ತಂಗಾಳಿ ಬೀರಿ
ಉಲ್ಲಸದ ಚಿಲುಮೆ ಕಾರಿ
ಬಾರೆ ನೀ ನನ್ನ ಜೊತೆಗೆ ...ಪ್ರಿತೀಯ ಪಯಣಕೆ...
ಆ ಕಣ್ನಿನ ನೋಟದ ಲಹರಿ
ಮಿಂಚಂತೆ ಬಂತು ಹಾರಿ
ಕುಣಿಯಿತು ಮನ ಎಲ್ಲೆ ಮೀರಿ
ಸೆರೆಹಿಡಿಯಲು ಪ್ರತೀ ಸಾರಿ
ಬಾರೆ ನೀ ನನ್ನ ಜೊತೆಗೆ ...ಪ್ರಿತೀಯ ಪಯಣಕೆ...
ಬಳಕುವ ನೀರಿನ ಝರಿ
ಧುಮುಕುತಿದೆ ನಿನ್ನಂತೆ ಜಾರಿ
ಉಳುಕುತಿದೆ ನಡು ಈಪರಿ
ಪುಳುಕಿತನಾದೆ ಸೋಬಗ ಹೀರಿ
ಬಾರೆ ನೀ ನನ್ನ ಜೊತೆಗೆ ...ಪ್ರಿತೀಯ ಪಯಣಕೆ...
ಕನಸಲ್ಲಿ ಕಂಡ ದಾರಿ
ಆ ಚಲ್ಲಿದ ಹೂ ದಳಗಳ ಏರಿ
ನೆಡೆಯೋಣ ಬಾ ಹೆಜ್ಜೆ ಊರಿ
ಕೈ ಹಿಡಿದು ಬಾರಿ ಬಾರಿ
ಬಾರೆ ನೀ ನನ್ನ ಜೊತೆಗೆ ...ಪ್ರಿತೀಯ ಪಯಣಕೆ...
ನಲಿಯೋಣ ಹಕ್ಕಿಯಂತೆ ಹಾರಿ
ಸುತ್ತೋಣ ಕೇರಿ ಕೇರಿ
ಹಂಚೋಣ ಒಲವಿನ ಓಲೆಗರಿ
ಸಾರೋಣ ಪ್ರಿತಿಸುವುದೇ ಎಲ್ಲರ ಗುರಿ
ಬಾರೆ ನೀ ನನ್ನ ಜೊತೆಗೆ ...ಪ್ರಿತೀಯ ಪಯಣಕೆ...