ಬುಧವಾರ, ನವೆಂಬರ್ 18, 2009

ಮೆಲ್ಲ ಮೆಲ್ಲನೆ

ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ
ಮೆಲ್ಲ ಮೆಲ್ಲನೆ ಬಂದು ಗಲ್ಲವ ಸವರುತ
ಮುತ್ತನ್ನೇ ಸುರಿಸಿ ನನ್ನ ಕನಸನ್ನು ತುಂಬುತ ...... ಪ

ಅಂದದ ಮೊಗವನ್ನು ಇಂದು ನೀ ತೋರುತ
ಮಂದಗಮನೆ ನೀನು ನಗುವನ್ನು ಬೀರುತ
ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ ೧

ಬಳ್ಳಿಯಂತೆ ಬಳುಕುತ ಚಂದದಿ ನಲಿಯುತ
ಮರವನ್ನು ಏರಿದಂತೆ ನನ್ನ ನೀ ಬಳಸುತ
ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ ೨

ಮೋಹದ ಪಾಶಕ್ಕೆ ಸಿಲುಕಿ ನೀ ಕುಣಿದಾಡುತ
ಪ್ರೀತಿ ಮಳೆ ಸುರಿಸಿ ನನ್ನನು ಅನುಸಿರಿಸುತ
ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ ೩

ಹಸಿರಲ್ಲಿ ಹಸಿರಾಗಿ ಉಸಿರಲ್ಲಿ ಉಸಿರಾಗಿ
ಕನಸಲ್ಲೂ ನನಸಲ್ಲು ನನ್ನ ಹೃದಯ ಆವರಿಸುತ
ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ ೪

ಚಂದುಳ್ಳಿ ಚಲುವೆ ನಿನ್ನ ಸನಿಹವ ಬಯಸುತ
ಹಾರಿ ಬರುವ ನನ್ನ ಸಂತೋಷ ಪಡಿಸುತ
ಮೆಲ್ಲ ಮೆಲ್ಲನೆ ನೀ ಬಾರೆ ನನ್ನಯ ಗೆಳತಿ ೫

ಶನಿವಾರ, ನವೆಂಬರ್ 7, 2009

ಪ್ರೀತಿ

ಹದಿ ಹರೆಯದ ಪ್ರೇಮ ಪ್ರೀತಿ
ಆಗುವುದು ಕೆಲವು ಹಲವು ರೀತಿ
ರೋಜ್, ಗಿಫ್ಟ್, ಕಾರ್ಡ್ ಕೊಟ್ಟರೆ
ಮುಳಕೆ ಒಡೆಯುವುದು ಆಗಲೇ ಪ್ರೀತಿ
ಮುಂದೆ ಹೋಗಿ ಹಿಂದೆ ತಿರುಗಿ ನೋಡಿದರೆ
ಸುರು ಆಗುವುದು ಹೊಸ ಕನಸಿನ ಪ್ರೀತಿ
ಕಣ್ಣಲಿ ಕಣ್ಣು ನೆಟ್ಟು ನೋಡಿದರೆ
ಸುರಿಯುವುದು ಮೋಹದ ಪ್ರೀತಿ
ಪಾರ್ಕು ಮರ ಸುತ್ತಿದಾಗ
ನೆಲೆಯುವುದು ಘಾಡವಾದ ಪ್ರೀತಿ
ಸಿನಿಮಾಕೆ ಹೋದರೆ ಮುಗುದೇ ಹೋಯಿತು
ಜೀವನ ವೆಲ್ಲ ಆಗುವುದು ಭಲೇ ಫಜೀತಿ