ಗುರುವಾರ, ಸೆಪ್ಟೆಂಬರ್ 24, 2009

ಸುಗ್ಗಿ

ಮುಂಗಾರು ಮಳೆಯು ಬಂತು
ನವಿರಾದ ಉಸಿರು ತಂತು
ಹನಿ ಹನಿಯು ಉದುರಿದಂತೆ
ಕರಿ ಮೋಡ ಕರಗಿ ಹೋಯಿತು

ಬೀಜಗಳು ಮೊಳಕೆ ಒಡೆದು
ತಳಿರ ಚಿಗುರು ಮೂಡಿ ಬಂತು
ಭುವಿಯ ಈ ಹಸಿರ ಉಡುಗೆ
ಕಣ್ಣಿಗೆ ತಂಪು ತಂಪು ತಂತು

ತಿಳಿ ಬಿಸಿಲು ಸ್ವಾದ ಹೀರಿ
ಗಿಡ ಬಳ್ಳಿ ಮರವೇ ಆಯಿತು
ಬಣ್ಣ ಬಣ್ಣ ದಿಂದ ಕುಡಿದ
ಹೂವು ನೆಲಕೆ ಶೃಂಗಾರ ಮಾಡಿತು

ದುಂಬಿಗಳು ಹಾರಿ ರಸವ ಹೀರುತ
ಹೂವಿಗೆ ಜೀವದ ಉಸಿರ ತುಂಬಿತು
ತೆನೆ ತೆನೆಯು ಒಡೆದ ಸವಿಗೆ
ಗಿಡ ಗಿಡವು ನಾಚುತ ಬಾಗಿ ನಿಂತಿತು

ಮಂದಹಾಸ ಮೂಡಿಸಿ ನಮಗೆ
ದಸರಾ ಹಬ್ಬದ ಸಡಗರ ತಂತು
ಸುಗ್ಗಿಯಾ ಹಾಡಿನ ಜೊತೆಗೆ
ಕುಣಿದಾಡುವ ಸಮಯ ತಂತು

ಒಲಿದ ಹೃದಯಗಳಿಗೆ
ಪಿಸು ಮಾತು ಮೂಡಿ ಬಂತು
ಹಸನಾದ ಬದುಕಿಗಿಂದು
ಹೊಸತಾದ ಬೆಳಕು ತಂತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ