ಶುಕ್ರವಾರ, ಜೂನ್ 5, 2009

ನೀನು

ಮನಸೆಲ್ಲವು ನೀನು
ಕನಸಲ್ಲಿಯು ನೀನು
ನನ್ನಲಿಯು ನೀನು
ಎಲ್ಲಿ ಎಲ್ಲಿಯೂ ನೀನು

ಸೂರ್ಯನ ಕಾಂತಿಯಲಿ ಇರುವ
ಹೊಳೆವ ಹೊಂಗಿರಣ ನೀನು
ವಜ್ರಗಳು ಮಿನುಗುವಂತೆ
ಮಿನುಗುವ ತಾರೆ ನೀನು

ಚಂದಿರನ ತಂಪು ನೀನು
ಮಂದಾರ ಕುಸುಮವು ನೀನು
ಇಂದಿರನು ನಾಚುವಂತ
ಸೌಂದರ್ಯದ ಕಡಲು ನೀನು

ಒಲವೆಂಬ ಸ್ನೇಹದ ಗುಡಿಯ
ಸುಂದರ ಕೆತ್ತನೆ ನೀನು
ಶಿಲ್ಪಿಯ ಮನಸಲಿ ಬಂದ
ಸೊಗಸಾದ ಕಲ್ಪನೆ ನೀನು

ಪ್ರಕ್ರುತಿಯಾ ಹಸಿರಿನ ಸೊಬಗ
ಸುರಿಸುವ ಕನ್ನಿಕೆ ನೀನು
ಸುರಿವ ಮಳೆ ಗಾಳಿಯಂತೆ
ಉಲ್ಲಸ ತರುವೆ ನೀನು

ಉಸಿರಲಿ ಉಸಿರಾದೆ ನೀನು
ಹೆಸರಲ್ಲಿ ಹೆಸರದೆ ನೀನು
ಮೃದುವಾದ ನವಿಲು ಗರಿಯ
ನವಿರಾದ ಸ್ಪರ್ಶ ನೀನು

ಹಸಿರು

ಮನಸು ಹಗುರಾಗಲು
ಬೆಳಕು ಹರಿಯಬೇಕು ಹೃದಯದಲ್ಲಿ
ಹೃದಯ ಹಸನಾಗಲು
ಕನಸು ಕಾಣಬೇಕು ಇರುಳಲ್ಲಿ
ಇರಿಳು ಸೋಗಸಾಗಲು
ಸಂಗಾತಿ ಇರಬೇಕು ನನಸಲ್ಲಿ
ನನಸು ಹಸಿರಾಗಲು
ಪ್ರೀತಿಯ ಮಳೆಯು ಸುರಿಯಬೇಕು ಭುವಿಯಲ್ಲಿ
ಭುವಿಯು ಸುಂದರವಗಿರಲು
ನಾವು ಪರಿಸರ ಕಾಪಾಡಬೇಕು ಪ್ರತಿದಿನದಲ್ಲಿ