ಮಂಗಳವಾರ, ಜುಲೈ 25, 2023

ಸೌಂದರ್ಯ!


ಚಂದಿರನ ಮೊಗದವಳೆ 
ಚಂದುಟಿಯ ಚಲುವೆ 
ಚಂದದಿ ನಗುತ ಬಾರೆ 

ಮುಂಗುರುಳು ಹಾರುತಿದೆ 
ಮೃದುವಾಗಿ ತೂಗಾಡುತ  
ಮೊಗವ ವರ್ಣಿಸಲಾರೆ 

ನವಿಲಿನಾ ಕಣ್ಣವಳೆ 
ನಡು ಸಣ್ಣ ಇರುವವಳೆ  
ನಡಿಗೆಗೆ ಸಾಟಿ ಯಾರೆ   

ಸಂಪಿಗೆಯ ನಾಸಿಕವೆ 
ಸೊಬಗಿನ ಕಿವಿಯವಳೆ 
ಸುಗಂಧ ಸೂಸುವವಳೆ 

ಹಾಲ್ಗಲ್ಲದ ಸೊಬಗೆ 
ಹವಳದಾ ತುಟಿಯೊಳಗೆ 
ಹೊಳೆವ ದಂತ ತಾರೆ 
 
ನೈದಿಲೆಯೆ ನಾಚಿಸುವ 
ನಿನ್ನ ಮುಖಕಮಲವ 
ನನಗೆ ಒಮ್ಮೆ ತೊರೆ, ನೀರೇ! 

-ಪ್ರಭಂಜನ.