ಬಾ ಬಾರೋ ಚಲುವ
ತೋರು ಬಾ ಮೊಗವ
ನಿನ್ನಂದ ಕಣ್ಮುಂದೆ ನೋಡುವ ಒಲವ
ಆ ಹಲ್ಲಿಲ್ಲದ ನಗುವ
ನೋಟಕ್ಕೆ ಸೆಳೆವ
ಕಣ್ಣಲ್ಲೇ ಕರೆವ
ಮನಸ್ಸೆಳೆದು ನಿನ್ನನ್ನೇ ನೋಡುವ ಒಲವ
ಆ ಹುಬ್ಬಿಲ್ಲದ ಚಲುವ
ಮುಂದ್ಮುಂದೆ ಸರಿವ
ಅಂಬೆಗಾಲಲಿ ನೆಡೆವ
ಹಿಡಿದೆತ್ತಿ ಮುದ್ದಾಡಿ ನೋಡುವ ಒಲವ
ಆ ನಯ ಮೊಗದ ಸೊಗವ
ಏನೆಂದು ಪೋಗಳಲಿ
ಚಂದಿರನಂದದಿ ಹೊಳೆವ
ವಜ್ರದ ಖಣಿಯ ಮುದ್ದಿನ ಮಣಿಯ
ಆ ಸೊಗಸಾದ ಸುಖವ