ಬಂದ್ರು ಬಂದ್ರು ಪಿ ಟಿ ಮೇಸ್ಟ್ರು
ಪೀಪಿ ಹಿಡ್ಕೊಂಡು
ಲಗಾಟೆ ಹೊಡಿಸ್ಕೊಂಡು
ಕೋಳಿ ತರದೇ ಕೂಗ್ಸಿ
ಕೋಕೋ ಆಟ ಆಡಿಸ್ಕೊಂಡು
ಗೆಜ್ಜೆ ಇರದೇ ಜಿಮ್ ಜಿಮ್
ಶಬ್ದದಿ ಲೇಜಿಮ್ ಮಾಡಿಸ್ಕೊಂಡು
ಫುಟ್ ಬಾಲ್, ಶಟಲ್, ವಾಲಿಬಾಲ್
ಆಡಿಸ್ತಿದ್ರು ಚಂಡು ಹಿಡ್ಕೊಂಡು
ಪಿ ಟಿ ಮೇಸ್ಟ್ರು ಬಹಳ ಶಿಸ್ತು
ಬರ್ತಿದ್ರು ಬಿಳೀ ಬಟ್ಟೆಹಾಕೊಂಡು
ನೋಡೋಕೆ ಖಡಕ್ ಇಲ್ಲದಿದ್ರೂ
ಬರ್ತಿದ್ವಿ ಅವರ ಶೀಟಿಗೆ ಹೆದರ್ಕೊಂಡು