ಬೇರು ನೋಡಿರಣ್ಣ
ಮರದ ಬೇರು ನೋಡಿ
ಸುತ್ತುವರಿದ ಮಣ್ಣಾ
ಜೇಡಿನ ಮಣ್ಣಾ ನೋಡಿ
ಧರೆಯೊಳಗೆ ಇಳಿಸಿ ಕಣ್ಣಾ
ಒಳಗಿನ ಮರ್ಮಾ ನೋಡಿ
ಒಣಗಿಹೋಗಿದೆ ಬಣ್ಣಾ
ಬೇರಿನ ತುದಿಯಾ ನೋಡಿ
ನೀರು ಧರೆಗೆ ಇಳಿಯದಣ್ಣಾ
ಸುತ್ತಲೂ ಸಿಮೆಂಟ್ ರಸ್ತೆ ನೋಡಿ
ಇಂಗು ಗುಂಡಿ ತೋಡಿರಣ್ಣಾ
ನೀರುಉಣಿಸಿ ಹಸಿರ ಕಾಪಾಡಿ
ಹಸಿರು ಉಸಿರು ಕೊಡುವುದಣ್ಣಾ
ಉಳಿಸಿ ಬೆಳಸಿ ನಲಿದಾಡಿ