ದಣಿದ ಜೀವನ ಸಾಗರವ ದಾಟಲು
ಕೊನೆಯ ದೋಣಿ ಬಂದಿದೆ
ಹಣೆಯ ಬರಹ ಬದಲಾಗಿಸಲು
ಅಣಿಯಾಗಿ ಹುಟ್ಟು ಹಾಕಿದೆ
ಗಳಿಸಿದ್ದೆಲ್ಲವ ತೊರೆದು ಬಂದೆವು
ಮುಳುಗೋ ಊರಲಿ ಸೂತಕ ತುಂಬಿದೆ
ಬಾಳಿ ಬದುಕಿದ ಮನೆಮಠ ಗುಡಿಗಳು
ಕಳೆಗುಂದಿ ನಿಂತು ಮೂಕಪ್ರೇಕ್ಷರಾಗಿವೆ
ಅದೆಷ್ಟೋ ಕತೆಗಳು ಸಾರಿ ಹೇಳಿಲು
ಬದುಕು ಬೆಸೆದ ಮೆಟ್ಟಿಲು ಮುಂದಿವೆ
ನದಿಯ ಅಂಚಲಿ ಲವಲವಿಕೆ ಇತ್ತು
ಬದಲಾಗಿ ನೀರವ ಮೌನ ತುಂಬಿದೆ
ತ್ಯಾಗ ಬದುಕಿನ ಮೂಲ ಸೂತ್ರ
ಭೋಗ ಪಡಬೇಕು ಇಲ್ಲಿ ಇರುವವರೆಗೆ
ಸಾಧ್ಯವೇ ಗಳಿಸಿದ್ದೆಲ್ಲಾ ಕೊಂಡು ಹೋಗಲು
ಸತ್ಯದರ್ಶನ ಎಲ್ಲರಿಗೂ ಆಗಬೇಕಿದೆ
-- ಪ್ರಭಂಜನ ಮುತ್ತಿಗಿ