ಕಾಲು ದಾರಿಯಲ್ಲಿ ದಿನಾ
ಕಾಲೇಜೆಗೆ ಹೋಗುತ್ತಿದ್ದೆ ನಾನು
ಕಾದು ನನಗಾಗಿ ನಿಲ್ಲುತ್ತಿದ್ದೆ
ಈ ಸೇತುವೆ ಮೇಲೆ ನೀನು
ಮೇಲೆ ಆಗಸ ಕೆಳಗೆ ಪ್ರಪಾತ
ನೀರಿಗೆ ಹೆದರುತ್ತಿದ್ದೆ ನಾನು
ಕೈ ಕೈ ಹಿಡಿದು ದಾಟುಸುತ್ತಿದ್ದೆ
ಸೇತುವೆ, ಎಚ್ಚರಿಕೆಯಿಂದ ನೀನು
ಮರದ ಪ್ರತಿ ಹಲಗೆ ಮೇಲೆ
ಬರೆದೆ ನನ್ನ ಹೆಸರು ನೀನು
ಸಪ್ತಪದಿ ತುಳಿದಂತೆ ಆಗುತ್ತಿತ್ತು
ಬಂದರೆ ನಿನ್ನ ಹಿಂದೆ ನಾನು
ಇಬ್ಬರ ಮನೆಗೆ ಇದ್ದದ್ದು
ಇದೊಂದೇ ಸೇತುವೆ ದಾರಿ
ನಮ್ಮಿಬ್ಬರ ಹೃದಯದ ಬಡಿತಕ್ಕೆ
ಸಾಕ್ಷಿಯಾಯಿತು ಸೇತುವೆ ನೋಡಿ
ಒಪ್ಪಲಿಲ್ಲ ನಮ್ಮ ಪ್ರೀತಿ ಅಂದು
ಸೇತುವೆ ದಾರೀಲಿ ನಾವು ಪರಾರಿ
ಮುರಿತು ಇಬ್ಬರ ಮನೆ ನಂಟು
ಮುರಿದ ಹಲಗೆ ತೂಗಾಡುತ್ತಿವೆ ನೋಡಿ