ತುಂತುರು ಮಳೆ ಬಂದಿತು
ಸುಂಟರಗಾಳಿ ಬರುವ ಸೂಚನೆ
ತಂಗಾಳಿ ಚಳಿಯಲಿ ಬೀಸಿತು
ತುಂಟ ಮನಸಿಗೆ ಬಿಸಿ ಯೋಚನೆ
ಹಳೆಯ ಮಳೆಗೆ ಕಾದಿರುವೆನು
ಹೇಳಲು ಮನಸಿನ ಭಾವನೆ
ಬೆಳೆಯಲು ಸಾಧ್ಯವೇ ಬರದಲಿ
ಕಾಳನು ಭುವಿಗೆ ಬಿತ್ತದೆ
ಕಲ್ಲನು ಎಸೆಯುತ ಇರುವೆನು
ಚಲ್ಲಿದ ಕರಿ ಮೋಡಕೆ
ಮೆಲ್ಲನೆ ಮಳೆಸುರಿಸಿ ಪ್ರೀತಿಯ
ಹುಲ್ಲು ಹುಟ್ಟಿಸಬಾರದೇ
ಕಳೆಯನು ತೆಗಿಯುತಿರುವೆನು
ಬೆಳೆಯಲಿ ಬೇರು ಗಿಡ ಗಟ್ಟಿಗೆ
ಹೊಳೆವ ಹೂ ಹಾಗೆ ಮೋಹಿಸಿ
ಕಳೆತ ಹಣ್ಣಾಗಿ ತೆಕ್ಕೆಗೆ ಬೀಳಬಾರದೇ