ಚಿತ್ರಗಳ ಬಿಡಿಸಿ ಒತ್ತಾಗಿ ಅಲಂಕರಿಸಿ
ರಾತ್ರಿ ಬಣ್ಣಗಳ ಚಲ್ಲಿ ಗೆಜ್ಜೆ ಕುಣಿಸುತಲಿ
ಪಾತ್ರೆ ಪೊಡಗವ ತುಂಬಿ ಬೀಗುತಲಿ
ಜಾತ್ರೆಗೆ ಹೋಗಿದ್ದೆ ಎತ್ತಿನ ಬಂಡೆಯಲಿ
ಊರ ಜಾತ್ರೆಗೆ ಬಂಡಿ ಸಿಗರಿಸಿಕೊಂಡಿತ್ತು
ಹಾರಿ ಬಣ್ಣ ಬಣ್ಣದ ಚಿಟ್ಟೆಗಳು ಬರುತಿತ್ತು
ಹರಿ ಹಳ್ಳದ ನೀರಿನ ಸಡ್ಡಿನ ಮುದವಿತ್ತು
ದಾರಿಯಲಿ ಹಕ್ಕಿಗಳ ಚಿಲಿಪಿಲಿ ಕಲರವವಿತ್ತು
ಹೊಂಬಣ್ಣದ ಹೋರಿಗಳು ಹಾರಿ ಓಡುತ್ತಿತ್ತು
ಹೊಂಬಾಳೆ ಕಟ್ಟಿದಾ ಗಾಡಿಯ ಎಳೆಯುತ್ತ
ರಂಭೆಯೊಬ್ಬಳ ನೋಡಿ ನಾ ಕಲ್ಲು ಹತ್ತಿಸಿದಾಗ
ಕೆಮ್ಮಣ್ಣಲಿ ಹುದುಗಿತು ಬಂಡಿ ಗಾಲಿ ಮುರಿದು
ತಲೆಗೆ ಏಟಾಗಿ ಪ್ರಜ್ಞೆ ತಪ್ಪಿತ್ತು ಕ್ಷಣದಲ್ಲಿ
ಹಳೆಯದೆಲ್ಲ ಮರೆತು ವರುಷಗಳೆ ಆಗಿತ್ತು
ಎಳೆಯ ಮಗಳ ಜೊತೆ ಜಾತ್ರೆಗೆ ಹೋದಾಗ
ಹಳೆಯಗಾಡಿಯ ಜೊತೆ ರಂಭೆ ನೆನಪಾಯ್ತು !
ಅವಳೇ ನನ್ನ ಬದುಕಿಸಿ ವರಸಿಯೂ ಆಗಿತ್ತು!
ರಾತ್ರಿ ಬಣ್ಣಗಳ ಚಲ್ಲಿ ಗೆಜ್ಜೆ ಕುಣಿಸುತಲಿ
ಪಾತ್ರೆ ಪೊಡಗವ ತುಂಬಿ ಬೀಗುತಲಿ
ಜಾತ್ರೆಗೆ ಹೋಗಿದ್ದೆ ಎತ್ತಿನ ಬಂಡೆಯಲಿ
ಊರ ಜಾತ್ರೆಗೆ ಬಂಡಿ ಸಿಗರಿಸಿಕೊಂಡಿತ್ತು
ಹಾರಿ ಬಣ್ಣ ಬಣ್ಣದ ಚಿಟ್ಟೆಗಳು ಬರುತಿತ್ತು
ಹರಿ ಹಳ್ಳದ ನೀರಿನ ಸಡ್ಡಿನ ಮುದವಿತ್ತು
ದಾರಿಯಲಿ ಹಕ್ಕಿಗಳ ಚಿಲಿಪಿಲಿ ಕಲರವವಿತ್ತು
ಹೊಂಬಣ್ಣದ ಹೋರಿಗಳು ಹಾರಿ ಓಡುತ್ತಿತ್ತು
ಹೊಂಬಾಳೆ ಕಟ್ಟಿದಾ ಗಾಡಿಯ ಎಳೆಯುತ್ತ
ರಂಭೆಯೊಬ್ಬಳ ನೋಡಿ ನಾ ಕಲ್ಲು ಹತ್ತಿಸಿದಾಗ
ಕೆಮ್ಮಣ್ಣಲಿ ಹುದುಗಿತು ಬಂಡಿ ಗಾಲಿ ಮುರಿದು
ತಲೆಗೆ ಏಟಾಗಿ ಪ್ರಜ್ಞೆ ತಪ್ಪಿತ್ತು ಕ್ಷಣದಲ್ಲಿ
ಹಳೆಯದೆಲ್ಲ ಮರೆತು ವರುಷಗಳೆ ಆಗಿತ್ತು
ಎಳೆಯ ಮಗಳ ಜೊತೆ ಜಾತ್ರೆಗೆ ಹೋದಾಗ
ಹಳೆಯಗಾಡಿಯ ಜೊತೆ ರಂಭೆ ನೆನಪಾಯ್ತು !
ಅವಳೇ ನನ್ನ ಬದುಕಿಸಿ ವರಸಿಯೂ ಆಗಿತ್ತು!