ಹಗಲಿರಿಳು ಛಳಿ ಮಳೆ ಬಿಸಿಲಿನಲೂ
ಹದ್ದಿನ ಕಣ್ಣಿಟ್ಟು ನಮ್ಮ ಕಾಯುವ ಸೈನಿಕರಿಹರು
ಹುಟ್ಟಡಗಿಸಿ ಹೊಡೆದು ಉರುಳಿಸುವರು
ಹೇಡಿಗಳ ಹೆಡೆಮುರಿ ಕಟ್ಟುವ ಧೀರ ಮನುಷ್ಯರಿವರು
ಹರಿದು ತಂತಿಯ ನುಸುಳಿ ಬರುವ
ಹೇಯ ಕೃತ್ಯವ ಹೆಣೆವ ಹೇಡಿ ಉಗ್ರರಿಹರು
ಹಸಿರಾದ ಹುಲ್ಲಿನ ಅ ಬದಿಯಲ್ಲಿ ಅಡಗಿ
ಹರಿಸಿ ನೆತ್ತರ ಹೀರುವ ಕ್ರೂರ ಮೃಗಗಳವರು
ಪ್ರತಿದಾಳಿ ನಡಿಸಿ ಈ ಬದಿಯಿಂದ ಓಡಿಸಿ
ಪ್ರೀತಿ ತಾಯಿಯ ಮಾನ ರಕ್ಷಿಸುವವರಿವರು
ಪ್ರಾಣ ತೆರುವರು ಕೆಚ್ಚದೆಯ ಒಡ್ಡಿ
ಪ್ರತೀಕ್ಷಣದಲ್ಲಿ ಗಡಿಕಾಯುವ ದೇಶ ಪ್ರೇಮಿಗಳಿವರು !!!