ಎದುರಿಗೆ ಇರದೇ ಹೋದರೂ
ಮಧುರ ನೆನಪು ಕಾದಿತೂ
ವಜ್ರದಂತೆ ಹೊಳೆವ ಕಣ್ಣು
ಛಿದ್ರಗೊಳಿಸುವೆ ಬೇಸವವನ್ನು
ಕಂಡು ವಿವಿದ ನೋಟವನ್ನು
ಉಲ್ಲಾಸ ತುಂಬಿದೇ ಮನಸಿಗಿನ್ನು
ನಾಟ್ಯ ಹೇಳಿ ಕೊಡುವೆ ಏನೋ
ಕೈ ಬೆರಳುಗಳ ಸೇರಿಸಿ ನೀನು
ಹಸ್ತ ಮುದ್ರಾ ಪ್ರದರ್ಶನವೇನೋ
ಒಂದು ಕೆನ್ನೆಗೆ ಎರೆದು ಮುತ್ತು
ಕೊಟ್ಟಾಗ ಕ್ಷಣ ಏರಿತು ಮತ್ತು
ಹೀಗೊಂದು ಹಗಲ ಕನಸ ಬಿತ್ತು
ಎದ್ದಾಗ ಪಕ್ಕದಲ್ಲಿ ನಿನ್ನ ಚಿತ್ರವಿತ್ತು