ಹೊಳೆಯುತಿರುವ ಕಣ್ಣೆ
ಹೊಸದೇನು ಹೇಳಲಿ
ಬೆಳಗುತಿರುವೆ ಕನ್ಯೆ
ಹೇಗೆಲ್ಲ ನಾ ಹೊಗಳಲಿ
ಕಪ್ಪು ಕಾಡಿಗೆ ಹಚ್ಚಿ
ಎದ್ದು ಬರುತಲಿದೆ ಹುಬ್ಬು
ಒಪ್ಪುವಂದದಿ ಬಿಚ್ಚಿ
ಮುದ್ದು ಮಾಡುತಿದೆ ರೆಪ್ಪೆ
ದಪ್ಪ ದುಂಡಿನ ಕೇಶ
ಉದ್ದವಾಗಿ ಸೆಳೆಯುತಿದೆ
ಬೆಪ್ಪನಾಗಿ ಬೆರಗಾಗಿ
ನಾ ಕದ್ದು ನೋಡುತಿಹೆ
ದುಂಡು ಮೊಗದಾ ನಡುವೆ
ನವಿರಾದ ನೈದಿಲೆಯು
ಚಂದದಾ ತುಟಿಗಳ ಮೇಲೆ
ನೀಳವಾದ ನಾಸಿಕವು
ಅಂದದಿ ಹೊಳೆಯುವ
ದಂತತುಂಬಿದ ಕಿರುನಗೆಯ
ಬಂದು ಬೆರಗಾಗಿ ನಾ
ಕದ್ದು ಕದ್ದು ನೋಡುತಿಹೆನು