ನೀ ಇಲ್ಲದಿದ್ದರೇನಂತೆ ನಿನ್ನ ಬಿಂಬ
ಜೊತೆಯಲಿ ಇರುವುದು ಹುಣ್ಣಿಮೆ ಬೆಳಕಂತೆ \\
ಚಂದಿರನಲಿ ಚಂದಿರನಂತೆ ಕಮಲದಲಿ ಕಮಲದಂತೆ
ಹೊಳೆಯುತಿದೆ ನಿನ್ನ ಕಣ್ಣುಗಳು ಸೂರ್ಯನ ಪ್ರತಿಬಿಂಬದಂತೆ
ಹವಳದ ತುಟಿಯಂತೆ ದಂತದಲಿ ದಾಳಿಂಬೆ ಜೋಡಿಸಿದಂತೆ
ನೀ ನಕ್ಕಾಗ ಜಾರಿ ಬೀಳುವವು ಮುತ್ತುಗಳು ಜಲಪಾತದಂತೆ
ಮೋಡದಲ್ಲಿ ಮೂಡುವ ಚಿತಾರದಂತೆ ಸಾಗರದ ಏರು ಅಲೆಗಳಂತೆ
ನೀ ಜೊತೆಇಲ್ಲದಿದ್ದರು ಬೀಳುವುದು ಕನಸು ನೀ ನನ್ನ ಸನಿಹ ಇದ್ದಂತೆ