ಮಂಗಳವಾರ, ಜೂನ್ 19, 2012

ಭರಚುಕ್ಕಿ

ಅಂಬರದಿಂದ ಗಿರಿಯ ತುದಿಯಿಂದ
ಸರಸರದಿ ಧರೆಗೆ ಇಳಿದೆ
ಭರಚುಕ್ಕಿಯಲಿ ನಲಿವೆ
ಕಾವೇರಿ .ನೀ ಜಾರಿದೆ

ತಂಗಾಳಿ ಸಿಂಚನ ತರುವೆ
ಮನಸಿಗೆ ಮುದವ ಕೊಡುವೆ
ಹಸಿರಿಗೆ  ಶ್ವೇತಸೀರೆ  ಉಡಿಸಿ 
ಮನಸಿನ ದುಗುಡ ಕಳೆವೆ 

ಗೆಜ್ಜೆಕಟ್ಟಿ ಕುಣಿಯುತ ಬರುವೆ
ಕಣ್ಣು ಮಿಟುಕದಾ ನೋಟ ಕೊಡುವೆ
ಮುತ್ತಿನರಾಸಿ ಚಲ್ಲಿದಂತೆ ಚದುರಿ 
ಹಾರುವ ಮಾಯಾಂಗನೆ ನೀ ಚಲುವೆ  

ಧರೆಗೆ ತಿಳೀ ಬಿಳಿ ಹಾಲನ್ನು ಎರೆವೆ
ನಿನ್ನ ವೈಯಾರಕೆ ಸಾಟಿ ಇದೆಯೇ
ಸುರಲೋಕದ ಸೊಗಸು ಸುರಿಸಿ
ಭೋರ್ಗರೆಯುತ ಕೈಬೀಸಿ ಕರೆವೆ

-ಪ್ರಭಂಜನ.