ಬುಧವಾರ, ಮಾರ್ಚ್ 7, 2012

ಬಹುದೂರ

ದೂರ ಬಹುದೂರ ಹೋಗಿರುವೆ ಎಲ್ಲೇ
ರಹದಾರಿ ಕಾಣದೆ ತಿರುಗುತಿರುವೆ ನಾ ಇಲ್ಲಿ

ಹೇಗಿರುವೆ ಎಲ್ಲಿರುವೆ ನನ್ನ ನಲ್ಲೆ
ಕಳಿಸುವೆ ಚಂದಿರನ ನೀ ಇರುವಲ್ಲೇ
ಬೆಳದಿಂಗಳ ಹೀರಿ ಒಂದು ನಗು ಚೆಲ್ಲೇ
ತಲುಪಿಸುವ ಅಂಬುಜ ನಾ ಇರುವಲ್ಲೇ

ಮನಸಿನ ಭಾರ ಕಾಣಿಸುವುದು ಎದೆಯಲ್ಲಿ
ಹಸಿ ಕನಸು ಸೊರಗುವವು ನೀನಿಲ್ಲದಿಲ್ಲಿ
ಬಹಳದಿನ ಕೊರಗುತ ನೀ ನಿಲ್ಲದಿರು ಅಲ್ಲಿ
ಹತ್ತು ಉಗಿಬಂಡೆಯನ್ನು ನನ್ನ ನೆನಪಲ್ಲಿ

ಬೀಸಬಹುದು ಬಿಸಿಗಾಳಿ ಹಗಲಿನಲ್ಲಿ
ತಂಗಾಳಿಯಾಗಿ ನಾ ಬರುವೆ ಇರುಳಲ್ಲಿ
ಮೈ ಮರೆಯೋಣ ಚಂದಿರನ ಬೆಳಕಲ್ಲಿ
ಎಲ್ಲರ ಜೊತೆ ನಲಿಯೋಣ ಈ ಜೀವನದಲ್ಲಿ