ಕಣ್ಣೇರು ಸುರಿಸದಿರು
ವರೆಸುತ ಸೆರಗೊಳಗೆ
ನಿಜವನು ಅರಿಯದ
ಇನಿಯ ಮರಗುವನು ಎಂದು
ನೋಡದಿರು ಆಕಾಶ
ಬೀಳದು ಉಲ್ಕಾ ನಕ್ಷತ್ರ
ಜೀವದಾ ಗೆಳೆಯನ
ಮನಸು ಹೊರಲಾಡುತಿದೆ ಎಂದು
ದೂರ ಇರುವ ತವರ
ನೆನೆದು ಕೊರಗದಿರು
ದುಖ ಹಂಚಿಕೊಳಲು
ನನ್ನವರು ಯಾರು ಜೊತೆ ಇಲ್ಲವೆಂದು
ದೂರದಿರು ದೇವರ
ಬದಲಾಗದು ಹಣೆಬರಹ
ಕಂಡು ಕನಸುಗಳೆಲ್ಲ
ನನಸಾಗಲಿಲ್ಲ ವೆಂದು
ಒಪ್ಪಿಕೊ ನಿಜವನ್ನು
ಮಾಡದ ತಪ್ಪನ್ನು ಬಿಟ್ಟು
ಬಿಡದಿರು ಛಲವ
ಸಾಧಿಸು ನೀ ಸರಿ ಎಂದು