ಭಾನುವಾರ, ಮಾರ್ಚ್ 20, 2011

ನಿನ್ನೊಲವ

ತೋರಿದ ಹುಸಿಕೂಪ,
ಬೀರಿದ ಮುಗುಳುನಗೆ,
ನಿಡಿದಾ ಆ ಸಲುಗೆ,
ನಾಟಿ ನನ್ನೆದೆಯು ,
ನಿನ್ನೊಲವ ಬಯಸಿದೆ ನನಗರಿಯದೆ.


ಆರೈಕೆಯ ನುಡಿಯು
ತೋರಿಕೆ ಇಲ್ಲದ ಪ್ರೀತಿ
ತೆರೆದು ಆಸರೆಯ ಬಾಹು
ವರಸಿದ ಆ ಕಣ್ಣಿರು
ನಿನ್ನೊಲವ ಬಯಸಿದೆ ನನಗರಿಯದೆ.

ನೀರೆರೆದು ಗೆಳೆತನಕೆ
ಸೇರಿದೆ ಹೃದಯವನು
ಇಣುಕಿದಾ ಕುಡಿನೋಟ
ಮರೆಮಾಚಿದಾ ಮನಸು
ನಿನ್ನೊಲವ ಬಯಸಿದೆ ನನಗರಿಯದೆ.


ಕಾಡದಿರು ನನ್ನನು
ಇರಲಾರೆ ಬಿಟ್ಟು ನಿನ್ನನು
ಸುಳಿಯೊಳಗೆ ಸಿಕ್ಕು
ಬಸವಳಿದಾ ಮನಸು
ನಿನ್ನೊಲವ ಬಯಸಿದೆ ನನಗರಿಯದೆ

ಶನಿವಾರ, ಮಾರ್ಚ್ 19, 2011

ಚಂದ್ರ

ತಿರುಗಿ ತಿರುಗಿ ಚಂದ್ರ
ಭುವಿಗೆ ಹತ್ತಿರ ಬಂದ
ನೀಲಿ ಆಕಾಶದಲ್ಲಿ
ಯಾರು ಹಚ್ಚಿದರು ಈ ಲಾಂದ್ರ || ಪ ||

ಕಾಲ ಕಲವ ಸರಿಸಿ
ದೇಶ ದೇಶವ ಸುತ್ತಿ
ಸುಸ್ತುಗಿ ಬಂದ್ಯಾ ನೀ
ನಮ್ಮುರ ಆಕಾಶ ಅರಸಿ || ೨ ||

ಮುದ್ದು ಮಕ್ಕಳಿಗೆ
ಪೆದ್ದು ಮಾಮಾ ನಾಗಿ
ನಸು ನಗುತ ನಭದಲ್ಲಿ
ಬಂದ್ಯಾ ದೊಡ್ಡ ಮೊಗದವನಾಗಿ ||2 ||

ಸಮುದ್ರ ರಾಜನ ಮಗಳ
ಮೋಹಕ್ಕೆ ಮರುಳಾಗಿ
ಉಕ್ಕಿ ಏರುವ ಅಲೆಗಳ ಮುತ್ತಿಕ್ಕಲು
ಬಂದ್ಯಾ ಸೊಗಸಾದ ಬೆಳಕಾಗಿ ||3|