ಶುಕ್ರವಾರ, ಡಿಸೆಂಬರ್ 17, 2010

ಭಂಡ

ಭಂಡ ಗಂಡನ ಜೊತೆ ಏಗುವುದು ಹೇಗಮ್ಮ
ಸೃಷ್ಟಿಯ ವಿನೂತನ ತುಂಡು ಇವನು
ಪಂಡಿತ ನಲ್ಲದೇ ಅತೀ ಮಾತಾಡುವನು
ಪುಂಡ ಪ್ರಪಂಚಕೆ ಇವನೇ ಅಗ್ರ ಗಣ್ಯನು

ಮನೇಲಿ ಹುಲಿ ಆದರೂ ಬೀದೀಲಿ ಇಲಿ ಇವನು
ಕಂಡ ರಾತ್ರಿ ಭಾವಿಗೆ ಹಗಲು ಬಿಳಿಸುವನು
ಗುಂಡಿನ ಸಹವಾಸ ಇಲ್ಲದೆ ಇದ್ದರು
ಹೆಂಡ ಕುಡಿದವರಂತೆ ತುರಾಡುವನು

ಬಂದ ಸಂಬಳವನ್ನು ಉಳಿಸಲು ಆಗದವನು
ಸಾಲಕ್ಕೆ ಸೈ ಬಡ್ಡಿಗೆ ಜೈ ಎನ್ನುವನು
ಹಿಂಡು ಹಿಂಡು ಹುಡಿಗಿಯರ ಜೋತೆಕೂಡಿ
ಸುತ್ತಾಡಿ ಬರಿಕೈಲಿ ಸಂಜೆ ಮನೆ ಸೇರುವನು

ಮಂಡು ಮನಸಿನ ಗಂಡು ಜಾತಿಯವನು
ಹೇಳಿದ್ದು ಬಿಟ್ಟು ಉಳಿದಿದ್ದು ಮಾಡುವನು
ಉಂಡಾಡಿ ಗುಂಡ ಎಂಬ ಬಿರಿದನ್ನ ಪಡೆದ
ಬ್ರಹ್ಮಾಂಡ ದೊಳು ಅತಿ ಶ್ರೇಷ್ಟ ಇವನು

ಶುದ್ದ ಸೋಮಾರೀ ಸಂಘದ ನಾಯಕನು
ಆ ದಂಡ ಪಿಂಡಗಳಲ್ಲೇ ಅತೀ ಪ್ರಚಂಡನು
ಈ ಧಾಂಡಿಗನಿಗೆ ಒಮ್ಮೆ ತಿರುಗಿ ಬಿದ್ದು ಬೈದರೆ
ಪ್ರೀತಿ ಮಾಡಿ ಮಲಗಿಸೋ ನನ್ನ ಗಂಡ ಇವನು