ಸೋಮವಾರ, ಫೆಬ್ರವರಿ 8, 2010

ಅಮೆರಿಕದಲ್ಲಿನ ಕೋಣೆ

ವಿಶಾಲವಾದ ಕೋಣೆಯ ಒಳಗೆ
ರತ್ನ ಕಂಬಳಿಯ ಮೆತ್ತನೆಯ ಹಾಸು
ಮಧ್ಯ ಮಂಚದ ಹಾಸಿಗೆಯ ಮೇಲೆ
ಮೃದುವಾದ ಎರೆಡು ತಲೆದಿಂಬು

ತಿಳಿ ಬಿಳಿಯ ಹೊದಿಕೆಯ ನಡುವೆ
ಸುಂದರ ಹೂವಿನ ಕುಂಚದ ಚಿತ್ರ
ಗೋಡೆಯ ಮೇಲೆ ತೂಗು ಹಾಕಿದ
ಅಗೋಚರ ಅರ್ಥದ ಚಿತ್ರ ವಿಚಿತ್ರ

ಚಿಕ್ಕದಾಗಿ ಉರಿವ ದೀಪದ ಮುಂದೆ
ಕಾಣುವ ನೀಳವಾದ ಹೂವಿನ ಕುಂಡ
ತಳಿರ ಹಸಿರ ಎಲೆಗಳ ನಡುವೆ
ಕಾಣುತಿದೆ ಕೆಂಪು ಗುಲಾಬಿ ದಂಡು

ನಯವಾಗಿ ರೆಗಿಸುತಿವೆ ನನ್ನ ಹೇಗಿದೆ
ನಮ್ಮ ಈ ವಯ್ಯಾರದ ಮೋಹಕ ನೋಟ
ಹೇಳಿದೆ ನಾ ನೀ ಜೊತೆ ಇದ್ದಿದ್ದರೆ
ಎಷ್ಟು ಚಂದ ಇರುತಿತ್ತು ನಮ್ಮ ಚಲ್ಲಾಟ

ಇಂಥಹ ಚಲುವಿಗೆ ಬೆರಗಾದ ಮನಸು
ಹೊಸ ಪದಗಳ ಹುಡುಕಿ ಹಾಡುತ
ಆಕಾಶದ ಎತ್ತರಕ್ಕೆ ಹಾರುತಿದೆ
ನವಿರಾಗಿ ನಲಿಯುತ ಮೈಮರೆಸುತಿದೆ

ಬಿರಿಸು ತಂಗಾಳಿಯಲಿ ಅಂಚಿನಲ್ಲಿ ತೇಲಿ
ಬರುತಲಿದೆ ಯಾವುದೋ ಕಾಣದ ಪ್ರೀತಿ
ಅಲ್ಲಿ ಇಲ್ಲಿ ಎಲ್ಲಲ್ಲೂ ಸಂಚು ಮಾಡುತ
ಹುಡುಕುತಿವೆ ಕಣ್ಣುಗಳು ನಿನ್ನ ಹಲವು ರೀತಿ